Kannada Actress Sruthi Hariharan allegations against Arjun Sarja : Senior Actor Rajesh files complaint against Sruthi Hariharan in KFCC.
ದಕ್ಷಿಣ ಭಾರತ ಚಿತ್ರರಂಗದಲ್ಲಿ 'ಸಂಭಾವಿತ' ಎಂದೇ ಗುರುತಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದಾರೆ. ಅರ್ಜುನ್ ಸರ್ಜಾ ಬಗ್ಗೆ ಆರೋಪಿಸಿರುವ ಶ್ರುತಿ ಹರಿಹರನ್ ವಿರುದ್ಧ ಹಿರಿಯ ನಟ, ಅರ್ಜುನ್ ಸರ್ಜಾ ಮಾವ ರಾಜೇಶ್ ಸಿಡಿದೆದ್ದಿದ್ದಾರೆ. ಸುಳ್ಳು ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ.